ಇದು ಬೆಂಗಳೂರಿನ ಕೃಷ್ಣರಾಜಪುರ ಪ್ರದೇಶದಲ್ಲಿ ದೊರೆತ ಕಲ್ಬರಹವನ್ನೊಳಗೊಂಡ ಒಂದು ವೀರಗಲ್ಲು. ಈ ವೀರಗಲ್ಲು ಗಂಗ ಸಾಮ್ರಾಜ್ಯದ ’ಶ್ರೀಪುರುಷ’ ಎಂಬ ರಾಜನ ಆಳ್ವಿಕೆಯ ಕಾಲದ್ದಾಗಿದ್ದು, ಕ್ರಿ.ಶ.೭೫೦ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದೆಂದು ಅಂದಾಜಿಸಲಾಗಿದೆ. ಇದರಲ್ಲಿನ ಬರಹವು ಹಳೆಗನ್ನಡದ ಲಿಪಿಯಲ್ಲಿದೆ. ಪ್ರಸ್ತುತ ಇದನ್ನು ಬೆಂಗಳೂರಿನ ಪುರಾತತ್ವ ಇಲಾಖೆಯ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಈ ವೀರಗಲ್ಲಿನ ಕೆಳಭಾಗವು ಒಡೆದುಹೋಗಿದ್ದು ಮೇಲ್ಭಾಗದಲ್ಲಿ ಕೆಲಸಾಲುಗಳ ಬರಹವನ್ನು ಕೆತ್ತಲಾಗಿದೆ. ಕಲ್ಲಿನ ಗಾತ್ರ 6' 5'6". ’ಮಾರೆಯ’ ಎಂಬ ವ್ಯಕ್ತಿಯು ಪ್ರಾಣತೆತ್ತುದ್ದರ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN55 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ. == ಅರ್ಥವಿವರಣೆ == - :- …………………………. …………… . == ವಿಶೇಷತೆ == ಕ್ರಿ.ಶ. ೭೫೦ನೇ ಇಸವಿಯ ಕಾಲದಲ್ಲಿ ಸ್ಥಾಪಿತವಾದ ಈ ವೀರಗಲ್ಲು ಬೆಂಗಳೂರು ಪ್ರದೇಶದಲ್ಲಿ ದೊರಕಿರುವ ಅತ್ಯಂತ ಹಳೆಯ ಕಲ್ಬರಹವಾಗಿದೆ. ಆಗಿನ ಕಾಲದ ಕನ್ನಡ ಲಿಪಿಯನ್ನು ಹೊಂದಿರುವುದರಿಂದ ಭಾಷೆ ಮತ್ತು ಲಿಪಿ ಬೆಳವಣಿಗೆಯ ಅಧ್ಯಯನದಲ್ಲಿ ಮಹತ್ವದ್ದಾಗಿದೆ. == ಆಕರಗಳು/ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == , ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018